"ಕಾಲಾದ್ರಿ ದೈವದ ಕಥೆ!"
ಕಾಲಾದ್ರಿ . ಕಾಳಾದ್ರಿ . ಕಾಳಾರಾತ್ರಿ . ಮೊದಲಾದ ಹೆಸರಿನಲ್ಲಿ ಆರಾಧಿಸಲ್ಪಡುವ ಈ ದೈವವನ್ನು ಮೂಡಬಿದರೆ ಧರ್ಮಸ್ಥಳ ಪರಿಸರ ದಲ್ಲಿ ದಟ್ಟವಾಗಿ ಜನ ನಂಬಿಕೊಂಡು ಬರುತ್ತಿರುದನ್ನು ನಾವು ಕಾಣಬಹುದು .
ಕರಿಂಜ ಗ್ರಾವುದ ನಡ್ಲಾಯ(ನಡಿಲ್ಲಾಯ)ಬರ್ಕೆಯಲ್ಲಿ ಒಂದು ಬಿಲ್ಲವರ ಮನೆತನವಿತ್ತು . ಇಲ್ಲಿಯ ಮನೆಯೊಡತಿ ಒತ್ತಿಕುಂದ ದೇವು ಬೈದೆದಿ ಅವಳಿಗೆ ಸಂತತಿ ಇರಲಿಲ್ಲ . ಆಗ ಅವಳು ಕದಿರೆಯ ದೇವರಿಗೆ ಒಂದು ಹರಕೆ ಹೊತ್ತಳು . ನಾನು ಗರ್ಬಧರಿಸಿ ಗಂಡು ಮಗುವಿಗೆ ತಾಯಿಯಾದರೆ ಕದಿರೆಯ ದೇವರಿಗೆ ಕಂಚಿಯ ತಿಪಲೆ (ದೀಪಸ್ಥಂಭ) ಒಪ್ಪಿಸುತ್ತೇನೆ . ಹೆಣ್ಣು ಹುಟ್ಟಿದರೆ ದೇವರ ಏಳು ಸುತ್ತಿನ ಅಂಗಣ ಗುಡಿಸುತ್ತೇನೆ. ಎಂದು ಮನೆತನದ ವ್ಯಾಪಾರವನ್ನು ವ್ರಧ್ದಿಸಿಕೊಡಬೇಕೆಂದೂ ದೇವು ಬೈದೆದಿ ದೇವರನ್ನು ಅನನ್ಯ ಬಕ್ತಿಯಿಂದ ಬೇಡಿಕೊಂಡಳು. ಒತ್ತಿಕುಂದ ದೇವು ಬೈದೆದಿಯ ಒಡಾಲಾಳದ ಕೂಗಿಗೆ ಒಲಿದು ಬಂದ ಕದಿರೆಯ ಕಾಲದ್ರಿ ದೈವ ಅವಳ ಬೆನ್ನತ್ತಿ ನಡ್ಲಾಯ ಬರ್ಕೆಗೆ ಬಂತು . ದೈವದ ಕಲೆ ಕಾರ್ನಿಕದಿಂದ ಬೈದೆದಿಯ ಬರ್ಕೆಯ ಗ್ರಹಗತಿಯಲ್ಲಿ ಕಳ್ಳು ಜಾಡಿ ತುಂಬ ಉಕ್ಕೇರಿ ಬಂತು . . ಅದೇ ರೀತಿ ತೆಂಗು/ಈಂದ್ ಮರಗಳಲ್ಲಿ ಕಳ್ಳು ತುಂಬಿ ಬಂತು . ಆ ಮನೆತನದವರು ಬಂದತಹ ದೈವವನ್ನು ಬಹಳ ಬಯ ಭಕ್ತಿಯಿಂದ ಚಾವಡಿಯಲ್ಲಿ ನಂಬಿಕೊಂಡು ಬಂದರು. ಮುಂದೆ ಕಾಲದ್ರಿ ದೈವವು ತುಳುನಾಡಿನ ಎಲ್ಲೆಡೆ ತನ್ನ ಕಾರ್ನಿಕದಿಂದ ಪ್ರಸಿದ್ಧಿ ಪಡೆಯಿತು.