• A.P.Phatak

    Posted by Sathish Agpala September 27, 2019 634 views - 0 comments - 0 likes - ##Yakshaguru  ##Yakshaganateacher  ##Yakshaganaonline 

    ಶ್ರೀ ಅನಂತ ಪದ್ಮನಾಭ ಫಾಟಕ್.

    (ಬಡಗು ತಿಟ್ಟು ಮದ್ದಲೆ, ಚೆಂಡೆ, ಭಾಗವತಿಕೆ ಗುರುಗಳು )

    ಜನ್ಮ ಸ್ಥಳ ಕಾರ್ಕಳ, ತಂದೆ ಶ್ರೀಕಂಠ ಫಾಠಕ್, ತಾಯಿ ಉಮಾ ಫಾಠಕ್ , ಶಿಕ್ಷಣ ಪಿಯುಸಿ, ಮೊದಲ ಗುರು ಎಣ್ಣೆಹೊಳೆ ಶ್ರೀನಿವಾಸ ನಾಯಕರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಅಭ್ಯಾಸ, ಮಹಾಬಲ ಕಾರಂತರಿಂದ ಮದ್ದಲೆ, ನೀಲಾವರ ಲಕ್ಷ್ಮೀನಾರಾಯಣ ರಾವ್ ಅವರಿಂದ ಭಾಗವತಿಕೆ, ಸಂಜೀವ ಸುವರ್ಣರಿಂದ ನೃತ್ಯ ಅಭ್ಯಾಸ. ನೀನಾಸಂನಲ್ಲಿ ವಾದಕ, ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಶಿಕ್ಷಕ, ಡಾIs ಶಿವರಾಮ ಕಾರಂತರ ಬ್ಯಾಲೆಯಲ್ಲಿ ಮದ್ದಲೆಗಾರ. ಕೆರೆಮನೆ ಶಂಭು ಹೆಗಡೆ ಅವರ ಶ್ರೀಮಯ ಕಲಾಕೇಂದ್ರದಲ್ಲಿ ಶಿಕ್ಷಕರಾಗಿ ಅನುಭವ, ಇಡಗುಂಜಿ ಮೇಳದಲ್ಲಿ ಮದ್ದಲೆ ಚೆಂಡೆ ವಾದಕ, ಕೊಂಡದಕುಳಿ ಮೇಳಕ್ಕೆ ಮದ್ದಳೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಶತಾವಧಾನಿ ಗಣೇಶರ ನಿರ್ದೇಶನದ, ಮಂಟಪರ ಅಭಿನಯದ ಏಕವ್ಯಕ್ತಿ, ಯುಗಳ ಯಕ್ಷಗಾನ ಮುಂತಾದ 2000 ಕಾರ್ಯಕ್ರಮಗಳಿಗೆ ಭಾಗವತ, ಮದ್ದಲೆಗಾರಿಕೆ ಮಾಡಿದ ಅನುಭವ. ಬೆಂಗಳೂರಿನ ಗಾನಸೌರಭ ಶಾಲೆಯಲ್ಲಿ ಹಿಮ್ಮೇಳ ಶಿಕ್ಷಕರಾಗಿದ್ದಾರೆ. ಕಾಶ್ಮೀರದ ಲೇಹ್, ಲಡಾಖ್ ನಿಂದ ಕನ್ಯಾಕುಮಾರಿವರೆಗೆ ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನ, ಮೂರು ಬಾರಿ ಉತ್ತರ ಅಮೇರಿಕ ಮತ್ತು ಒಂದು ಬಾರಿ ದಕ್ಷಿಣ ಅಮೇರಿಕಾ, ಯುರೋಪ್, ಸಿಂಗಪೂರ್, ಫಿಲಿಪ್ಪೀನ್ಸ್, ಬ್ಯಾಂಕಾಕ್, ಮಲೇಷ್ಯಾ, ಲಾವೋಸ್, ಯಾಂಗೂನ್, ಬೆಹರಿನ್, ಬಾಂಗ್ಲಾ ದೇಶಗಳಿಗೆ ಪ್ರಯಾಣ. ಮೂಡಬಿದಿರೆಯಲ್ಲಿ ನಡೆದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನದ 1000 ಪ್ರದರ್ಶನ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಸಮ್ಮಾನ. ಮದ್ದಳೆ ಮಹಾಬಲ ಕಾರಂತ ಪ್ರಶಸ್ತಿ, ಕವಿ ಮುದ್ದಣ ಪ್ರಶಸ್ತಿ, ಕ್ಯಾಲಿಫೋರ್ನಿಯಾದ ಸನಾತನ ಸಂಸ್ಥೆಯ ನಾದ ಶಶಾಂಕ ಬಿರುದು, ಕೆರೆಕೈ ಕೃಷ್ಣ ಭಟ್ಟ ಸಂಸ್ಮರಣ ಪುರಸ್ಕಾರ ಪಡೆದಿರುತ್ತಾರೆ. ಮದ್ದಳೆಗೆ ಪ್ರಥಮ ಬಾರಿಗೆ ಧ್ವನಿವರ್ಧಕವನ್ನು ಅಳವಡಿಸಿ ನುಡಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.