Sankrthi - ಸಂಕೃತಿ » Notes » Priyanka K Mohan

 • Priyanka K Mohan

  Posted by Sathish Agpala September 26, 2019 581 views - 0 comments - 0 likes - ##yakshagana  ##Yakshaganateacher  ##yak 
  ಪ್ರಿಯಾಂಕ ಕೆ. ಮೋಹನ್
  (ಬಡಗುತಿಟ್ಟು ಯಕ್ಷಗಾನ ಗುರುಗಳು ) 


  ಕೆ. ಮೋಹನ್ ಹಾಗೂ ವೀಣಾ ಮೋಹನ್ ಅವರ ಸುಕುಮಾರಿ ಪ್ರಿಯಾಂಕ ಹುಟ್ಟಿ ಬೆಳೆದದ್ದು
  ಬೆಂಗಳೂರಿನಲ್ಲಾದರೂ ಅವರ ಜೀವ - ಭಾವದಲ್ಲಿ ಅಪ್ಪಟ ಕರಾವಳಿಯ ಕಮನೀಯ ಪ್ರಭಾವಳಿಯಿದೆ.
  ಪ್ರಿಯಾಂಕ ಬೆಂಗಳೂರಿನ ಯಕ್ಷಗಾನ ಲೋಕದಲ್ಲಿ ಈಗಾಗಲೇ ಚಿರಪರಿಚಿತರಾದ ಕಲಾವಿದೆ. ತನ್ನ
  ಏಳನೇ ವಯಸ್ಸಿನಲ್ಲೇ ಬಡಗಿನ ಬಣ್ಣ - ಭೂಷಣದ ಬೆಡಗಿಗೆಗ ಮಣಿದು, ಮಣಿನೂಪುರವನ್ನು
  ಸಡಗರದಲ್ಲಿ ಕಟ್ಟಿ ಕುಣಿದು ಕಲಾರಸಿಕರ ಮನಸೂರೆಗೊಂಡ ಯಕ್ಷಕಲಾಭಿನೇತ್ರಿ.
  ಏಳನೇ ವಯಸ್ಸಿಗೆ ಯಕ್ಷಗಾನ ಪೂರ್ವರಂಗವನ್ನು ಪೂರ್ಣವಾಗಿ ಅಭ್ಯಸಿಸಿ ರಂಗಸೌಧದ
  ತಳಹದಿಯನ್ನು ಭದ್ರವಾಗಿಸಿಕೊಂಡ ಪ್ರಿಯಾಂಕ, ಪುರುಷವೇಷಗಳಲ್ಲಿ ಪುರುಷವೇಷಗಳಲ್ಲಿ ಪ್ರತಿಭೆಯ ಪಾರಮ್ಯವನ್ನು
  ಮರೆಯುವವರು. ಸುಲಲಿತ ನೃತ್ಯ ವೈವಿಧ್ಯ, ಸುಸ್ಪಷ್ಟ ಅಭಿನಯ ವೈಶಿಷ್ಟ್ಯ, ಸುಂದರ ವೇಷ ವೈಭವ
  ಹಾಗೂ ಸುಸ್ಪಷ್ಟ ವಾಕ್ ವೈಖರಿಯಲ್ಲಿ ಪೌರಾಣಿಕ ಪ್ರಸಂಗಗಳ ಪಾತ್ರಗಳಿಗೆ ಜೀವ ತುಂಬಿ, ಅಪಾರ
  ಅಪಾರ ಪ್ರಕ್ಷಕರ ಹಾರ್ದಿಕ ಪ್ರಶಂಶೆಗೆ ಪಾತ್ರರಾಗಿದ್ದಾರೆ. .
  ಪ್ರಿಯಾಂಕ ಕೇವಲ ಯಕ್ಷರಂಗದಲ್ಲಿ ಮಾತ್ರ ಕಲಾವಿದೆಯಲ್ಲ. ಭರತನಾಟ್ಯಗಾತಿಯೂ ಹೌದು.
  ನೃತ್ಯ ವಿದುಷಿ ದಿ. ಪದ್ಮಿನಿರಾವ್ ಅವರ ಶಿಷ್ಯೆಯಾಗಿ ಸಶಕ್ತ ಭರತನಾಟ್ಯ ಶಿಕ್ಷಣವನ್ನು ಪಡೆದ ಇವರು
  ಅನೇಕ ನೃತ್ಯ ಕಾರ್ಯಕ್ರಮ ನೀಡಿದ್ದಾರೆ.ಪ್ರಸ್ತುತ ಗುರು ಅಶೋಕಕುಮಾರ್ ಅವರಲ್ಲಿ ಉನ್ನತ ನೃತ್ಯ
  ಶಿಕ್ಷಣವನ್ನು ಪಡೆದು, ಅನೇಕ ನೃತ್ಯ ಸಂಯೋಜನೆಯನ್ನು ಮಾಡಿರುತ್ತಾಳೆ.
  ರಾಷ್ಟ್ರೀಯ ನಾಟಕ ಶಾಲೆಯ ಪ್ರಸಿದ್ಧ ರಂಗ ನಿರ್ದೇಶಕರಾದ ಗೋಪಾಲಕೃಷ್ಣ ನಾಯಿರಿ,
  ರಾಜಾರಾಂ ಹಾಗೂ ಸುಬ್ರಹ್ಮಣ್ಯ ಅವರ ರಾಷ್ಟ್ರೀಯ ನಾಟಕಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ರಂಗ
  ಎಸ್.ಎಸ್.ಎಲ್.ಸಿ ಹಾಗೂ ಯಶವಂತ ಕನ್ನಡ ಚಲನಚಿತ್ರಗಳಲ್ಲಿ ನೃತ್ಯ ವಿಭಾಗದಲ್ಲಿ ಅಭಿನಯಿಸಿದ
  ಹೆಗ್ಗಳಿಕೆ ಇವರದ್ದಾಗಿದೆ.
  ನೂರಾರು ಶಿಷ್ಯರನ್ನು ಪಡೆದ ಯಕ್ಷಗುರುಗಳಾದ ಪ್ರಿಯಾಂಕ ಕೆ. ಮೋಹನ್ ಇಂಜಿನಿಯರಿಂಗ್
  ಪದವೀಧರಾಗಿದ್ದಾರೆ. ವಾರದ ಎರಡು ದಿವಸಗಳಲ್ಲಿ ತ್ಯಾಗರಾಜನಗರದಲ್ಲಿರುವ ಯಕ್ಷದೇಗುಲದಲ್ಲಿ ಅನೇಕ
  ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಾಳೆ. ಇಂದಿನ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ಅಚ್ಚ
  ಕನ್ನಡದಲ್ಲಿ ಸ್ವಚ್ಛ ಯಕ್ಷಗಾನ ತರಬೇತಿ ಪಡೆಯುತ್ತಿರುವುದು ಶ್ಲಾಘನೀಯ. ಇದಲ್ಲದೆ ಹವ್ಯಾಸಿಗಳಿಗೂ
  ಯಕ್ಷಗಾನ ತರಬೇತಿ ನೀಡುತ್ತಿರುವುದು ಉನ್ನತ ಕಲಾವಂತಿಕೆಗೆ ಸಾಕ್ಷಿ.
  ಬೆಂಗಳೂರು ಜೈನ್ ಕಾಲೇಜು, ಸುವರ್ಣ ಕರ್ನಾಟಕ, ‘ಗಾನಗಂಧರ್ವ’ ಸಂಸ್ಥೆ, ಕೂಟ
  ಮಹಾಜಗತ್ತು ಸೇರಿದಂತೆ ಹಲವರು ಸಂಘ - ಸಂಸ್ಥೆಗಳ ಗೌರವ ಮಾನ - ಸಂಮಾನ ಇವರಿಗೆ
  ದೊರಕಿದೆ.
  ಯಕ್ಷಗಾನಂ ವಿಶ್ವಗಾನಂ ಯಕ್ಷಗಾನಂ ಗೆಲ್ಗೆ