• Nikhil Pai

    Posted by Sathish Agpala September 26, 2019 563 views - 0 comments - 0 likes - ##Yakshaguru  ##Yakshaganateacher  ##Yakshaganaonline 

    ಶ್ರೀ ನಿಖಿಲ್ ಪೈ, ಮಂಗಳೂರು.

    (ತೆಂಕು ತಿಟ್ಟು ಚೆಂಡೆ-ಮದ್ದಲೆ ಗುರುಗಳು )

    ಬಾಲ್ಯದಿಂದಲೇ ಪಂಡಿತ್ ನಾಗೇಶ್ ಪೈ, ಇವರಲ್ಲಿ ತಬಲ ವಾದನ ಕಲಿತು, ಯಕ್ಷಗಾನ ಚಂಡೆ ಮದ್ದಳೆಯನ್ನು ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಂದ ಕಲಿತಿರುತ್ತಾರೆ.

    ಬಿ.ಕಾಂ ಪದವಿಯನ್ನು ಆಳ್ವಾಸ್ ಕಾಲೇಜಿನಿಂದ ಪಡೆದಿರುತ್ತಾರೆ.ಆಳ್ವಾಸ್ ಧೀಂಕಿಟ ಯಕ್ಷಗಾನ ಕೇಂದ್ರದ ಯಕ್ಷಾಭ್ಯಾಸದಲ್ಲಿ 5 ವರ್ಷಗಳ ಕಾಲ ಭಾಗವಹಿಸಿರುತ್ತಾರೆ. ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇಲ್ಲಿ ಸೇವೆ ಸಲ್ಲಿಸಿರುರುತ್ತಾರೆ. ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಬೆಂಗಳೂರಿನಲ್ಲಿ ತೆಂಕು ತಿಟ್ಟು ಯಕ್ಷಗಾನ ಚಂಡೆ-ಮದ್ದಳೆ ಗುರುಗಳಾಗಿ ಯಕ್ಷ ಸೇವೆಯನ್ನು ಮುಂದುವರಿಸುತ್ತಾ ಇದ್ದಾರೆ.