ಎಂ.ಎಸ್ಸಿ. ಸ್ನಾತಕೋತ್ತರ ಪದವೀಧರ. ಐಐಎಸ್ಸಿ ಬೆಂಗಳೂರಿನಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಆರಂಭ. ಬಾಲ್ಯದಲ್ಲಿ ಪೇತ್ರಿ ಕೃಷ್ಣ್ರಾಯ ಪ್ರಭು ಮತ್ತು ಚೇರ್ಕಾಡಿ ಮಂಜುನಾಥ ಪ್ರಭು ಅವರಿಂದ ಬಡಗು ಶೈಲಿ ಯಕ್ಷಗಾನ ಅಭ್ಯಾಸ. ಮೂಡಬಿದಿರೆ ಆಳ್ವಾಸ್ ಕಾಲೇಜಿನ ‘ಧೀಂಕಿಟ’ ಯಕ್ಷಗಾನ ಕೇಂದ್ರದಲ್ಲಿ ಶೇಖರ್ ಶೆಟ್ಟಿಗಾರ್ ಅವರಿಂದ ತೆಂಕು ಶೈಲಿಯ ಯಕ್ಷಗಾನ ಕಲಿಕೆ.ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಮತ್ತು ಬನ್ನಂಜೆ ಸಂಜೀವ ಸುವರ್ಣರಿಂದ ಹೆಚ್ಚಿನ ಕಲಿಕೆ. ಕಟೀಲು ಹಾಗೂ ಎಡನೀರು ಮೇಳದಲ್ಲಿ ಕಲಾವಿದನಾಗಿ ದುಡಿದ ಅನುಭವ. ಗಣೇಶ ಕೊಲೆಕಾಡಿ ಅವರಿಂದ ಯಕ್ಷಗಾನ ಭಾಗವತಿಕೆ ಮತ್ತು ಛಂದಸ್ಸು ಅಭ್ಯಾಸ. ಸದ್ಯ ಸಿನೆಮಾ, ಯಕ್ಷಗಾನ, ರಂಗಭೂಮಿ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಬೆಂಗಳೂರಿನಲ್ಲಿ ಹವ್ಯಾಸಿ ಕಲಾವಿದರಾಗಿ, ಯಕ್ಷಗಾನ ಗುರುಗಳಾಗಿ ಯಕ್ಷಗಾನ ಸೇವೆಯನ್ನು ಮುಂದುವರಿಸುತ್ತ ಇದ್ದಾರೆ.