ಸಹಸ್ರ ವರ್ಷದ ಅಂಚಿಗೆ ಸೇರುವ ತುಳು ಲಿಪಿ. ಲಿಪಿಯ ಅಧ್ಯಯನದ ದೃಷ್ಟಿಯಿಂದ ಕೋಟ ಹಿರೇ ಮಹಾಲಿಂಗೇಶ್ವರ ದೇವಾಲಯದ ಇನ್ನೊಂದು ಶಾಸನ ಸುಮಾರು ಒಂದು ಸಾವಿರದ ಐದು ನೂರು ವರ್ಷಕ್ಕೂ ಹಿಂದೆ ಹೋಗುತ್ತದೆ. ಅಂದರೆ ಆ ದೇವಾಲಯ ನಮ್ಮ ಉಡುಪಿ ಜಿಲ್ಲೆಯಲ್ಲಿನ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದು ಇದನ್ನು ಬಿಟ್ಟರೆ ಅದೇ ಜಿಲ್ಲೆಯ ವಡ್ದರ್ಸೆ ಮತ್ತು ಉದ್ಯಾವರ ಬಾದಾಮಿ ಚಾಲುಕ್ಯರ ಕಾಲದ ಶಾಸನಗಳು.